ಪ್ರಶ್ನೋತ್ತರ

ಕಾವೇರಿ ತಪ್ಪಲಿನ ನಕ್ಷೆಗಳನ್ನು ನೋಡಿ, ಅಲ್ಲಿ ನೀರು ಬಳಕೆಯಾಗುತ್ತಿರುವ ರೀತಿಯ ಬಗ್ಗೆ ನಿಮಗೆ ಗೊತ್ತ? ಇದನ್ನು ನೋಡಿ ಸ್ವತಃ ನೀವೇ ನದಿಯ ಎರಡೂ ಬದಿಯಲ್ಲಿರುವ ಪಟ್ಟಣ ಹಾಗೂ ನಗರಗಳ ಸಂಸ್ಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತ್ತೀರ!
 
ಮತ್ತಷ್ಟು...


ಜೀವನದಿ ಕಾವೇರಿ

ಕನ್ನಡ ನಾಡಿನ ಜೀವ ನದಿ ಕಾವೇರಿ. ದಕ್ಷಿಣದ ಗಂಗೆ ಎಂದೇ ಹೆಸರಾದ ಇದು, ಹಲವು ಕೋಟಿ ಜನ-ಜೀವಿಗಳ ಜೀವನಾಧಾರ. ಕೊಡಗಿನ ಜನರ ಆರಾಧ್ಯ ದೈವ. ಈ ನದಿಯ ಮೂಲ ಸೆಲೆಯಿರುವುದು ಹಸಿರು ಹೊದ್ದ ಬ್ರಹ್ಮಗಿರಿಯ ತಲಕಾವೇರಿಯಲ್ಲಿ. ಅರಬ್ಬಿ ಸಮುದ್ರದ ಅನತಿ ದೂರದಲ್ಲಿಯೇ ಹುಟ್ಟಿದರೂ, ಅದಕ್ಕೆ ಬೆನ್ನಿಕ್ಕಿ, ಕೋಟ್ಯಂತರ ಜನರ ದಾಹ ತಣಿಸಿ, ಲಕ್ಷಾಂತರ ಎಕರೆ ಭೂಮಿಗೆ ನೀರುಣಿಸಿ, ನೂರಾರು ಮೈಲು ದೂರ ಕ್ರಮಿಸಿ, ಬಂಗಾಳ ಕೊಲ್ಲಿಯ ಒಡಲಲ್ಲಿ ಲೀನವಾಗುತ್ತದೆ ಕಾವೇರಿ. ಈ ಜೀವ ನದಿಯ ನೀರುಣ್ಣಲು ನೆರೆಯ ರಾಜ್ಯಗಳೊಂದಿಗೆ ನಿರಂತರ ಸೆಣಸುತ್ತಿದ್ದೇವೆ.
ಆದರೆ ಕಾವೇರಿ ಬಗ್ಗೆ ನಾವೆಷ್ಟು ತಿಳಿದುಕೊಂಡಿದ್ದೇವೆ? ಅದರ ತಟದಲ್ಲಿರುವ ಸಂಸ್ಕೃತಿಯ ಬಗ್ಗೆ ಎಷ್ಟು ತಿಳಿದಿದ್ದೇವೆ? ಕಾವೇರಿ ಜನಿಸುವಲ್ಲಿಂದ ಪ್ರಾರಂಭಿಸಿ ದೂರದ ಬಂಗಾಳ ಕೊಲ್ಲಿಯವರೆಗೂ ಚಿತ್ರಗಳನ್ನು ತೆಗೆದು ಬರೆದಿಟ್ಟ ಕ್ಲೇಯ್ರ್ ಹಾಗೂ ಆರಿಯೋಲ್ ರೊಂದಿಗೆ ಒಂದು ಪುಟ್ಟ ಪ್ರಯಾಣ ಮಾಡೋಣ. ಬರ್ತೀರ?

ಚಿತ್ರಗಳು ಮತ್ತು ಮೂಲ ಬರಹ: Claire Arni ಮತ್ತು Oriole Henri

ಕನ್ನಡಕ್ಕೆ ತಂದವರು: ಹೇಮ ಕದ್ರಾಪುರ

ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ >>

ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ

narayanpura-dam.jpg

ಇದೇನು ಬಹಳ ಹಿಂದಿನ ಸಂಗತಿಯಲ್ಲ. ಕೇವಲ ನಾಲ್ಕು ವರ್ಷಗಳ ಹಿಂದೆ ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದ ದಿನಗಳ ಮಾತು. 2004ರ ಜುಲೈ 24ರಂದು ವಿಧಾನಸಭೆಯಲ್ಲಿ  ಮಾತನಾಡುತ್ತಿದ್ದ ಮುಖ್ಯಮಂತ್ರಿ ಧರ್ಮಸಿಂಗ್ 'ಕೃಷ್ಣಾ ನದಿಯ ನೀರಿನಲ್ಲಿ ತನ್ನ ಪಾಲಿನಿಂದ ಒಂದು ತೊಟ್ಟು ನೀರನ್ನೂ ಕರ್ನಾಟಕ ಆಂಧ್ರಪ್ರದೇಶಕ್ಕೆ ನೀಡದು. ಈ ಮುಖ್ಯಮಂತ್ರಿ ಆಂಧ್ರಪ್ರದೇಶಕ್ಕೆ ನೀರನ್ನು ಬಿಡುವ ತಪ್ಪು ಮಾಡಿಲ್ಲ. ಈ ಬಗೆಯ ಯಾವ ಉದ್ದೇಶವನ್ನೂ ಇಟ್ಟುಕೊಂಡಿಲ್ಲ' ಎಂದು ಆವೇಶ ಭರಿತರಾಗಿ ಹೇಳಿದರು.

ಕರ್ನಾಟಕ ವಿಧಾನಸಭೆಯಲ್ಲಿ ಪ್ರತೀ ವರ್ಷವೂ ಇಂಥ ಆವೇಶ ಭರಿತ ಮಾತುಗಳನ್ನು ಕೃಷ್ಣಾ,  ಕಾವೇರಿ ನೀರಿನ ವಿಷಯಗಳಿಗೆ ಸಂಬಂಧಿಸಿದಂತೆ ನಾವು ಕೇಳುತ್ತಲೇ ಇರುತ್ತೇವೆ. ಆದರೆ ಈ  ತನಕವೂ ಯಾವ ಮುಖ್ಯಮಂತ್ರಿಯೂ ಕೃಷ್ಣಾ ಮೇಲ್ದಂಡೆ ಯೋಜನೆಯ ಪೂರ್ಣ ಕಾಮಗಾರಿ  ಮುಗಿದಿಲ್ಲದೇ ಇರುವುದರ ಕುರಿತು ಇಷ್ಟು ಅವೇಶದಿಂದ ಮಾತನಾಡಿದ್ದಿಲ್ಲ. ಬಚಾವತ್ ತೀರ್ಪಿನ  ಅನ್ವಯ ತನಗೆ ದೊರೆತಿರುವ ನೀರಿನ ಎಷ್ಟು ಭಾಗವನ್ನು ಕರ್ನಾಟಕ ಬಳಸಿಕೊಳ್ಳುತ್ತಿದೆ ಎಂಬುದರ  ಬಗ್ಗೆ ಮಾಹಿತಿ ನೀಡುವುದಕ್ಕಾಗಲೀ ಕೇಳುವುದಕ್ಕಾಗಲೀ ಯಾವ ರಾಜಕಾರಣಿಯೂ ಮನಸ್ಸು  ಮಾಡಿಲ್ಲ. ಈಗ ಹೊರಬಿದ್ದಿರುವ ಮಾಹಿತಿಯೇನಿದ್ದರೂ ಆನುಷಂಗಿಕವಾಗಿ ಚರ್ಚೆಗಳ ಮಧ್ಯೆ ಇಲ್ಲವೇ  ಸಂಶೋಧಕರ ಆಸಕ್ತಿಯಿಂದ ಹೊರಬಿದ್ದಿರುವ ವಿಷಯ ಮಾತ್ರ.  ಮುಂದೆ ಓದಿ »

ನಮ್ಮ ಕೊಳವೆ ಬಾವಿಯ ಮರುಪೂರಣ

ನೀರು ಕೃಷಿಕನಿಗೆ ಉಸಿರಿದ್ದಂತೆ. ಅಡಿಕೆ ಪತ್ರಿಕೆಯವರು ಹೇಳುವಂತೆ 'ನೀರ ನಿಶ್ಚಿಂತೆ' (ಬಹುಶ: ಶ್ರೀಪಡ್ರೆ ಕಾಯಿನ್ ಮಾಡಿದ ಶಬ್ದ), ನಿಜಕ್ಕೂ ಒಂದು ಸುಂದರ ಅನುಭವ. ನಾನು ಹುಟ್ಟುವುದಕ್ಕೂ ಮೊದಲು, ತಂದೆಯವರು ಆರ್ಥಿಕವಾಗಿ ಆಗಿನ್ನೂ ಸಾಕಷ್ಟು ಅಸ್ಥಿರವಾಗಿದ್ದಾಗ, ವರುಷಾನುಗಟ್ಟಲೆ ನೀರಿಲ್ಲದೆ ಪರದಾಡಿದ್ದರು. ಆ ಕಾಲವೆಲ್ಲ ಕಳೆದ ಮೇಲೆ ನಾನು ಸೆಕೆಂಡ್ ಪಿಯುಸಿಯಲ್ಲಿದ್ದಾಗ ನಾವೊಂದು ಬೋರ್ ವೆಲ್ಲ್ ಮಾಡಿಸಿದೆವು. ಅದು ಬಹಳ ವರ್ಷಗಳವರೆಗೆ ನಮ್ಮೆಲ್ಲಾ ಕೃಷಿಕಾರ್ಯಗಳನ್ನು ಆಧರಿಸುವ ಏಕೈಕ ನೀರಿನ ಮೂಲ ಆಗಿತ್ತು (ಈಗ ಇನ್ನೊಂದು ಬೋರ್ವೆಲ್ಲ್ ಇದೆ). ಆಗ ನಾವು ಅಡಿಕೆ ಪತ್ರಿಕೆಯ ಅನುಭವಗಳನ್ನು ನೋಡಿ ನಮ್ಮ ಬೋರ್ ಗೂ ಮರುಪೂರಣ ಮಾಡಬೇಕೆಂದು ಹೊರಟೆವು. ಬೇರೆ ಬೇರೆ ಕೃಷಿಕರು ಸರಳ ತಂತ್ರಗಳಿಂದ ತೊಡಗಿ ಸಾಕಷ್ಟು ಕ್ಲಿಷ್ಟ ವಿಧಾನಗಳ ವರೆಗೆ ಬೇರೆ ಬೇರೆ ತಂತ್ರಗಳನ್ನು ಪ್ರಯೋಗಿಸಿದ್ದರು. ನಾವು (ಅಂದರೆ ತಂದೆ) ಇದ್ದುದರಲ್ಲಿ ಸರಳವಾದ ವಿಧಾನವನ್ನು ಆಯ್ದುಕೊಂಡೆವು.

ನಮ್ಮ ಬೋರ್ವೆಲ್ ಇರುವ ಜಾಗ ಮೊದಲನೆಯ ಚಿತ್ರದಲ್ಲಿ ತೋರಿಸಿದಂತೆ ಇದೆ. ಬೋರ್ ವೆಲ್ ಇರುವೆಡೆಗೆ ಸ್ಥಳ ಸ್ವಲ್ಪ ಇಳಿಜಾರಾಗಿ ಇದೆ. ಮೊದಲೆಲ್ಲ ನೀರು ಪಕ್ಕದಲ್ಲಿ ಇರುವ ರಸ್ತೆಯ ಮೂಲಕ ಹರಿದು ನಮ್ಮ ಜಾಗದಿಂದ ಹೊರಗೆ ಹೋಗುತ್ತಿತ್ತು. ನಾವು ಅದನ್ನು ಸ್ವಲ್ಪ ತಿರುಗಿಸಿ, ಬೋರ್ ವೆಲ್ ನ ಬದಿಗೆ ಹರಿಸಿದೆವು.  ಮುಂದೆ ಓದಿ »

ಮತ್ತಷ್ಟು ವಿಶೇಷ ಬರಹಗಳು »

ಈ ಪೋರ್ಟಲ್ ಗೆ ಭೇಟಿ ನೀಡಿದ ನಿಮಗೆ ಏನು ಅನಿಸಿತು? ಯಾವುದು ಇಷ್ಟವಾಯಿತು? ಯಾವುದು ಇಷ್ಟವಾಗಲಿಲ್ಲ? - ತಪ್ಪದೆ ನಮಗೆ ಬರೆದು ಕಳಿಸಿ!
ಅಲ್ಲದೆ ಈ ಪೋರ್ಟಲ್ ಗೆ ಏನೇನು ಸೇರಿಸಬಹುದು? ನಿಮಗೂ ಆಸಕ್ತಿ ಇದ್ದು ನೀವೂ ಬರೆಯುತ್ತೀರಾ? - ಹೌದಾದರೆ ಈ ಕೂಡಲೆ ನಮಗೆ ಬರೆದು ತಿಳಿಸಿ!
ನಿಮ್ಮ ಇ-ಮೇಯ್ಲ್ ಟೈಪಿಸಿ:

ಪ್ರಶ್ನೆ ಕೇಳಿ!
ನೀರಿನ ಸುತ್ತ ನಿಮಗಿರುವ ಪ್ರಶ್ನೆಗಳನ್ನು ಕೇಳಿ.


ಜನವರಿ 12, 2007ರಂದು, ಭಾರತ ಜಲ ಪೋರ್ಟಲ್ ನ ಉದ್ಫಾಟನೆಯನ್ನು ಭಾರತದ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಡಾ. ಮನಮೋಹನ್ ಸಿಂಗ್ ರವರು ನವದೆಹಲಿಯ ತಮ್ಮ ನಿವಾಸದಲ್ಲಿ ನೆರವೇರಿಸಿದರು.



ಮಳೆನೀರು ಸಂಗ್ರಹಣೆಯ ತಾಂತ್ರಿಕ ಕೈಪಿಡಿ. ಮಳೆಯ ಪೀಪಾಯಿಗಳು, ಪುನರುಜ್ಜೀವನ ಹೊಂಡಗಳು (recharge pits), ಸಂಪುಗಳಲ್ಲಿ (sump) ಮಳೆನೀರನ್ನು ಕಳಿಸುವುದು, ಮಳೆನೀರಿನ ಶೋಧಕಗಳು (filters), ಪುನರುಜ್ಜೀವನ ಬಾವಿಗಳು, ಇವುಗಳ ವಿಷಯವನ್ನು ಚರ್ಚಿಸುತ್ತದೆ.
ಮುಂದೆ ಓದಿ


ನೀರಿನಲ್ಲಿರುವ ಬ್ಯಾಕ್ಟೀರಿಯಾದಿಂದ ಉಂಟಾಗುವ ರೋಗಗಳನ್ನು ತಡೆಗಟ್ಟುಲು, ಸೂಕ್ಷ್ಮಾಣುಗಳ ಉಂಟಾಗುವ ಪರಿಣಾಮಗಳನ್ನು ಪರಿಹರಿಸುವ ದೃಷ್ಟಿಯಿಂದ, ನೀರಿನ ಸುರಕ್ಷತೆಯನ್ನು ನಿರ್ಣಯಿಸಲು ಮಾಡುವ ಸರಳ ಪರೀಕ್ಷಣೆಗಳು ಅತ್ಯಗತ್ಯ.
ಮುಂದೆ ಓದಿ

Syndicate

Syndicate content