ದೊಡ್ಡ ನೀರಿನ ತೊಟ್ಟಿ ನೀರಿನ ದುರ್ವ್ಯಯವನ್ನು ತಡೆಯುತ್ತದೆ!

ದೊಡ್ಡ ನೀರಿನ ತೊಟ್ಟಿ

ನೀರಿನ ಧಾರಾಳ ಲಭ್ಯತೆ ಹಲವೊಮ್ಮೆ ಅದರ ದುರ್ವ್ಯಯಕ್ಕೆ ಕಾರಣವಾಗುವುದು ನೀವೆಲ್ಲಾ ಗಮನಿಸಿರಬಹುದು.ದೊಡ್ಡ ದೊಡ್ಡ ಪಂಚತಾರಾ ಹೋಟೆಲುಗಳಲ್ಲಿ,ಶ್ರೀಮಂತರ ಮನೆಗಳಲ್ಲಿ,ದೊಡ್ಡ ನೀರಿನ ಸಂಗ್ರಾಹಕ ತೊಟ್ಟಿಗಳಿದ್ದು,ದಿನದ ಇಪ್ಪತ್ತನಾಲ್ಕು ಗಂಟೆಯೂ ನೀರು ನಳ್ಳಿಯಲ್ಲಿ ಧಾರಾಳವಾಗಿ ಬರುತ್ತಿರುತ್ತದೆ.ಕೈತೊಳೆಯಲು ಹೋದವರು ಬುರ್ರೆಂದು ಬರುವ ನೀರನ್ನು ಅನವಶ್ಯಕವಾಗಿ ಬಿಟ್ಟು,ಒಂದೆರಡು ಲೀಟರಿನಲ್ಲಿ ಆಗುವ ಕೆಲಸಕ್ಕೆ ಲೀಟರುಗಟ್ಟಲೆ ನೀರು ವ್ಯಯಿಸುವುದು ಕಂಡು ಬರುತ್ತದೆ.
ಆದರೆ ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ನೀರಿನ ತೊಟ್ಟಿಗಳು ನೀರಿನ ಅಪವ್ಯಯ ತಡೆಗಟ್ಟಲು ಅವಶ್ಯಕ ಎನ್ನುವುದು ನನ್ನ ಅನಿಸಿಕೆ.ನಮ್ಮ ಸಂಸ್ಥೆಯಲ್ಲಿ ಎರಡು ಮೂರು ಸಾವಿರ ಜನರು ಇದ್ದು, ಸಾವಿರಾರು ಲೀಟರು ನೀರು ಖರ್ಚಾಗುತ್ತದೆ. ಅದರೆ ಸಣ್ಣ ತೊಟ್ಟಿಯ ಬದಲು ಲಕ್ಷ ಲೀಟರು ನೀರು ಹಿಡಿಸುವ ತೊಟ್ಟಿ ನಿರ್ಮಿಸಿದ ಬಳಿಕ ನೀರಿನ ಅಪವ್ಯಯ ಕಡಿಮೆಯಾಗಿರುವುದನ್ನು ನಾನು ಗಮನಿಸಿದ್ದೇನೆ.ಹೇಗೆಂದು ಊಹಿಸಿ ಹೇಳಿ.

The thickness of the walls protect the water from heating and hence minimise the evaporation.

I am waiting for the final reply from the author ....

ಉತ್ತರಿಸಲು ನಿಧಾನವಾದುದಕ್ಕೆ ಕ್ಷಮಿಸಿ.
ಚಿಕ್ಕ ನೀರಿನ ಟ್ಯಾಂಕ್ ಇದ್ದಾಗ,ಅದು ಬೇಗನೆ ಖಾಲಿಯಾಗುತ್ತಿತ್ತು. ನಳ್ಳಿ ತಿರುಗಿಸಿದಾಗ ನೀರು ಬರದಿದ್ದರೆ,ಅದನ್ನು ಹಾಗೆಯೇ ತೆರೆದಿಟ್ಟು ಹೋಗುವವರೇ ಹೆಚ್ಚು.ನಂತರ ಪಂಪು ಚಾಲೂ ಆದಾಗ,ಟ್ಯಾಂಕ್ ತುಂಬಿದಂತೆ,ತೆರೆದಿಟ್ಟ ನಳ್ಳಿಯಿಂದ ನೀರು ಗಟಾರ ಸೇರುತ್ತಾ ಇರುತ್ತದೆ-ನಂತರ ಯಾರಾದರೂ ನಿಲ್ಲಿಸುವ ವರೆಗೂ. ಹತ್ತಾರು ನಳ್ಳಿ ತೆರೆದಿದ್ದರೆ,ಟ್ಯಾಂಕು ತುಂಬಲೂ ತಡ,ನೀರೂ ಹರಿದು ಹೋಗುತ್ತಲೇ ಇರುತ್ತದೆ.
ದೊಡ್ಡ ಟ್ಯಾಂಕನ್ನು ಪ್ರತಿದಿನ ತುಂಬಿಸುತ್ತಿದ್ದರೆ, ಈ ಪರಿಸ್ಥಿತಿಯೇ ಉದ್ಭವಿಸದು!
ಮೇಲ್ನೋಟಕ್ಕೆ ದೊಡ್ಡ ಟ್ಯಾಂಕ್ ಇದ್ದರೆ,ನೀರು ಜಾಸ್ತಿ ಖರ್ಚು ಬರಬಹುದು ಎನ್ನಿಸಿದರೂ,ವಾಸ್ತವ ಹಾಗಿರದೇ ಇರಬಹುದು-ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ.

ಹೊಸ ಕಾಮೆಂಟ್ ಸೇರಿಸಿ

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.
19 + 1 =
Solve this simple math problem and enter the result. E.g. for 1+3, enter 4.